Pages

Wednesday, 6 February 2013

ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠ - ಅಬ್ಬೆ ತುಮಕೂರು


ಅಬ್ಬೆ ತುಮಕೂರು, ಯಾದಗಿರಿ ಜಿಲ್ಲೆಯಲ್ಲಿರುವ  ಒಂದು ಸಣ್ಣ ಗ್ರಾಮ. ಯದಗಿರಿಯಿಂದ 10  ಕಿಲೋಮೀಟರು  ಚಿತ್ತಾಪುರ ಮಾರ್ಗದಲ್ಲಿ ಬರುತ್ತದೆ.

ಈ ಗ್ರಾಮವು  ಶ್ರೀ ವಿಶ್ವರಾಧ್ಯರ  ದೇವಾಲಯಕ್ಕೆ  ಸುಪ್ರಸಿದ್ಧ. ಇಲ್ಲಿ  ಶರಣ ಸಕ್ಕರೆಪ್ಪ ಗೌಡರ ಸಮಾಧಿಯೂ ಇದೆ. ಸಕರೆಪ್ಪ  ಗೌಡರ  ಸಮಾಧಿಯ ಮೇಲೆ ಶ್ರೀ  ವಿಶ್ವರಾಧ್ಯರ ಮೂರ್ತಿಯು ಸ್ಥಾಪಿಸಲಾಗಿದೆ.

ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದ ಈಗಿನ ಪೀಠಾಧಿಪತಿಗಳು, ಶ್ರೀ ಶ್ರೀ ಶಟಸ್ಥಲ ಬ್ರಹ್ಮಿ ಆಚಾರ್ಯ  ರತ್ನ ಡಾ||ಗಂಗಾಧರ ಶಿವಾಚಾರ್ಯ  ಮಹಾಸ್ವಾಮೀಜಿ.

ಶ್ರೀ ವಿಶ್ವರಾಧ್ಯರು ಚನ್ನಯ್ಯ ಶಾಸ್ತ್ರೀಗಳು ಮತ್ತು ನೀಲಮ್ಮಾ ದಂಪತಿಗಳ ಮಗನಾಗಿ ೧೮೮೦ ವಿಕ್ರಮ ಸಂವತ್ಸರ ಚೈತ್ರ ಶುದ್ಧ ತದಿಗೆ ಗುರುಮಠ ಪ್ರಾತಃ ಕಾಲದ ಶುಭಗಳಿಗೆಯಲ್ಲಿ ಜನಿಸಿದರು. ವಿಶ್ವಾರಾಧ್ಯರು ಬೆಳೆಯುತ್ತಾ ರಾಚೋಟ ಎಂಬ ಗುರುವಿನಲ್ಲಿ ವಿದ್ಯೆಯನ್ನು ಕಲಿತರು. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಬಾಲಕನಾಗಿದ್ದಾಗಲೇ ವಿಶ್ವರಾಧ್ಯರು ಅನೇಕ ನೀತಿಗಳನ್ನು ತೋರಿಸುತ್ತಾ ವಿದ್ಯೆಯಲ್ಲಿ ಪಾರಂಪರಾಗ ತೊಡಗಿದ್ದಾರೆ.

ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ ಗುಲ್ಬರ್ಗ ಜಿಲ್ಲೆಯ, ಜೇವರಗಿ ತಾಲೂಕಿನ  ಗಂವ್ಹಾರ ಗ್ರಾಮ. ಪ್ರತಿ ವರ್ಷವೂ, ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಮಠದ ಪೀಠಾಧಿಪತಿ  ಡಾ||ಗಂಗಾಧರ ಸ್ವಾಮೀಜಿಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತರು ಗಂವ್ಹಾರದಿಂದ ಅಬ್ಬೆತುಮಕೂರಿಗೆ  ಪಾದಯಾತ್ರೆ ಮಾಡುತ್ತಾರೆ. ಡೊಳ್ಳು ಕುಣಿತ, ಕಂಸಾಳೆ ನೃತ್ಯ, ವೇಷಗಾರರ ಆಟ ಜನರ ಮನವನ್ನು ರಂಜಿಸಿತ್ತವೆ.

ಇಲ್ಲಿ ಶ್ರೀ ವಿಶ್ವರಧ್ಯರ ಜಾತ್ರೆಯು ಪ್ರತಿ ವರ್ಷವೂ ಶಿವರಾತ್ರಿಯ ನಂತರ 5 ದನೇ ದಿನ ಜರಗುತ್ತದೆ. ಸಿದ್ದಿ ಪುರುಷ ವಿಶ್ವಾರಾಧ್ಯರ ಧರ್ಮಪತ್ನಿ ಬಸವಾಂಬೆ ತಾಯಿಯ ಜಾತ್ರೆಯೂ ಸಡಗರ ಸಂಭ್ರಮದಿಂದ ಭಕ್ತರು ಆಚರಿಸಿಸುತ್ತಾರೆ. ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯುತ್ತದೆ. ಪಲ್ಲಕ್ಕಿ ಉತ್ಸವ ಸಂದರ್ಭದಲ್ಲಿ ನಡೆಯುವ ಪುರವಂತಿಕೆ ನೋಡುಗರ ಮೈ ನವಿರೇಳಿಸುತ್ತದೆ.

2 comments: