Pages

Friday, 7 February 2014

ಶ್ರೀ ಕ್ಷೇತ್ರ ಅಬ್ಬೆ ತುಮಕೂರು ಡಾ! ಶ್ರೀ ಗಂಗಾಧರ ಸ್ವಾಮಿಗಳು


ಅಬ್ಬೆ ತುಮಕೂರು ಗಂಗಾಧರ ಸ್ವಾಮಿಗಳಿಗೆ ಗೌರವ ಡಾಕ್ಟಾರೇಟ್



ಶ್ರೀ ಗುರು ವಿಶ್ವರಾಧ್ಯರ ಮೂರ್ತಿ ಪುನರ್ಬಿಂಬ ಪ್ರತಿಷ್ಥಾಪನಾ ಸಮಾರಂಭ

ಶ್ರೀ ಗುರು ವಿಶ್ವರಾಧ್ಯರ ಮೂರ್ತಿ ಪುನರ್ಬಿಂಬ ಪ್ರತಿಷ್ಥಾಪನಾ ಸಮಾರಂಭ 

ಶ್ರೀ ಕ್ಷೇತ್ರ  ಅಬ್ಬೆ ತುಮಕೂರು ಜಿಲ್ಲ ಯಾದಗಿರಿ ದಿನಾಂಕ ೧೧,೧೨, ೧೩, ೧೪, ಮತ್ತು ೧೫ ಏಪ್ರಿಲ್ 



















































Monday, 18 March 2013

ಅಬ್ಬೆತುಮಕೂರು ಅಭಿನವ ಕಲ್ಯಾಣ




ಜಾತ್ಯತೀತ ನೆಲೆಯಲ್ಲಿ ಸರ್ವರನ್ನು ಸಮಾನತೆಯಿಂದ ಕಾಣುವ ಮಾನವತೆಯ ನೆಲೆಬೀಡಾಗಿರುವ ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠ ಅಭಿನವ ಕಲ್ಯಾಣವಾಗಿದೆ ಎಂದು ಗುಲ್ಬರ್ಗದ ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.
  ತಾಲೂಕಿನ ಅಬ್ಬೆತುಮಕೂರಿನಲ್ಲಿ ವಿಶ್ವರಾಧ್ಯರ 58ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಧರ್ಮ ಸಮಾವೇಶದಲ್ಲಿ ಮಾತನಾಡಿ, ನಾಡಿನಲ್ಲಿರುವ ಅನೇಕ ಮಠಾಧೀಶರು ಬಸವಾದಿ ಶರಣರ ತತ್ವಗಳನ್ನು ಬಾಯಲ್ಲಿ ಮಾತ್ರ ಪಠಿಸುತ್ತಾರೆ. ಆಚರಣೆಯಲ್ಲಿ ಮಾತ್ರ ಶೂನ್ಯ. ಆದರೆ ಅಬ್ಬೆತುಮಕೂರಿನ ಡಾ. ಗಂಗಾಧರ ಸ್ವಾಮೀಜಿ ಶರಣ ಪರಂಪರೆಯನ್ನು ಅನುಸರಿಸುತ್ತಾ, ಎಲ್ಲರನ್ನು ಒಂದೇ ಭಾವದಿಂದ ಕಾಣುತ್ತಾ, ಬಸವಾದಿ ಶರಣರ ಪರಂಪರೆಯನ್ನು ಮಠದಲ್ಲಿ ಸಾಕ್ಷಾತ್ಕಾರಗೊಳಿಸಿದ್ದಾರೆ ಎಂದು ಕೊಂಡಾಡಿದರು.
5 ದಿನಗಳ ವಿಶೇಷ ಕಾರ್ಯಕ್ರಮ: ಬರುವ ಏಪ್ರಿಲ್‌ನಲ್ಲಿ 5 ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಅಬ್ಬೆತುಮಕೂರು ಮಠ ಐತಿಹಾಸಿಕ ದಾಖಲೆ ಬರೆಯಲಿದೆ. ನಾಡಿನ 5 ಸಾವಿರ ಮಠಾಧೀಶರಿಗೆ ಮಾಡಲಾಗದ ಕಾರ್ಯವನ್ನು ಗಂಗಾಧರ ಶ್ರೀಗಳು ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ಹಾರಕೂಡದ ಚನ್ನವೀರ ಶಿವಾಚಾರ್ಯರು ಮಾನವ ಧರ್ಮ ಸಮಾವೇಶ ಉದ್ಘಾಟಿಸಿ, ಕಾಶಿ ಘನಪಂಡಿತರಾಗಿದ್ದ ವಿಶ್ವರಾಧ್ಯರು, ಅನುಭಾವದ ಮೇರುಗಿರಿಯನ್ನೇರಿದ ಮಹಾನುಭಾವ. ಜನಮನದ ಕಾವಿಕೆಯನ್ನು ಕಳೆಯಲು ಶ್ರಮಿಸಿದ ಮಹಾಂತರು. ಅಂತಹ ಸಿದ್ಧಿ ಪುರುಷ ಇಂದಿಗೂ ಜಾಗೃತವಾಗಿದ್ದು, ಲಕ್ಷಾಂತರ ಭಕ್ತರನ್ನು ಉದ್ದರಿಸುತ್ತಿದ್ದಾರೆ ಎಂದು ನುಡಿದರು.
  ವಾಗಣಗೇರಿಯ ಡಾ. ವಿಶ್ವರಾಧ್ಯ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮೀಜಿ ಮಾತನಾಡಿ, ಡಾ. ಗಂಗಾಧರ ಸ್ವಾಮೀಜಿಗಳ ಜನಕಲ್ಯಾಣ ಕಾರ್ಯಗಳನ್ನು ಕೊಂಡಾಡಿದರು.
ವಿಶ್ವಾರಾಧ್ಯರು ಮನುಕುಲದ ಉದ್ಧಾರಕರು: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವರಾಧ್ಯರು ಮನುಕುಲದ ಉದ್ಧಾರಕರು. ಆತನ ದಿವ್ಯ ಚೈತನ್ಯ ಕೈ ಹಿಡಿದು ನಡೆಸುತ್ತಿದೆ. ಎಲ್ಲ ಭಕ್ತ ಸಮೂಹದ ಸಹಕಾರದಿಂದ ಶ್ರೀಮಠದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ನಡೆಯಲು ಕಾರಣವಾಗಿದೆ ಎಂದರು.
  ಏಪ್ರಿಲ್‌ನಲ್ಲಿ ನಡೆಯುವ ಕಾರ್ಯಕ್ರಮ ಬೃಹತ್ ಪ್ರಮಾಣದಾಗಿದ್ದು, ಐದು ದಿನಗಳ ಕಾಲ ಸಾಂಸಾರಿಕ ಜಂಜಾಟ, ತಾಪತ್ರಾಯಗಳಿಂದ ಮುಕ್ತರಾಗಿ ಶ್ರೀಮಠ ನಮ್ಮದೆಂಬ ಭಾವದಿಂದ ತಾವೆಲ್ಲ ಬಂದು ಸಮಾರಂಭವನ್ನು ಯಶಸ್ವಿಗೊಳಿಸುತ್ತೀರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
  ಶಹಾಪುರದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ದೊರನಳ್ಳಿಯ ವೀರಮಹಾಂತ ಶಿವಾಚಾರ್ಯರು, ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು, ಹಲಕಟ್ಟಿಯ ಮುನೀಂದ್ರ ಶಿವಾಚಾರ್ಯರು, ಚರಬಸವೇಶ್ವರ ಮಠದ ಬಸವಯ್ಯ ಶರಣರು, ಯಡ್ರಾಮಿಯ ರುದ್ರಮುನಿ ಶಿವಾಚಾರ್ಯರು, ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ, ಜಿಪಂ ಅಧ್ಯಕ್ಷೆ ಮರೆಮ್ಮ ಶಾಣ್ಯೆನೂರ, ಡಾ.ಶರಣಭೂಪಾಲರೆಡ್‌ಡಿ ನಾಯ್ಕಲ್ ಇದ್ದರು. ವಿಶ್ವನಾಥರೆಡ್ಡಿ ಮಾಲಿಪಾಟೀಲ್, ವೆಂಕಟರೆಡ್ಡಿ ಮಾಲಿಪಾಟೀಲ್ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.
ಸನ್ಮಾನ: ಇದೇ ವೇಳೆ ಹೈದರಾಬಾದಿನ ಸೋಲಿ ಜನಾರ್ದನರೆಡ್ಡಿ, ಸಿದ್ರಾಮರೆಡ್ಡಿ ತಂಗಡಗಿ, ರಾಯಚೂರಿನ ಸವಾದೆಪ್ಪ ಶರಣರು, ಹೊನ್ನಕಿರಣಗಿಯ ಅಖಂಡಪ್ಪ ಶಿರವಾಳ, ಕಲ್ಬುರ್ಗಿಯ ಬಸವರಾಜ ಮತ್ತಿಮುಡು, ಮುಂಬೈಯ ರಾಜು ಬಾಂಬೆ, ಬಸಪ್ಪ ಮೇಸ್ತ್ರಿ, ಯಾದಗಿರಿ ಮಲ್ಲಿಕಾರ್ಜುನ ಸಿರಗೋಳ, ಶಹಾಬಾದ ಹಾಗೂ ಬಿಜಾಪುರದ ವಿಶ್ವಾರಾಧ್ಯ ಸೇವಾ ಸಮಿತಿ ಅಧ್ಯಕ್ಷರು, ಸೋಲಾಪುರದ ಪಂಚಾರಿ, ಶಹಾಬಾದನ ವಿಶ್ವರಾಧ್ಯ ಪಬ್ಲಿಸಿಟಿ ಮಾಲೀಕರನ್ನು ಸನ್ಮಾನಿಸಲಾಯಿತು.
  ಬಸವರಾಜ ಶಾಸ್ತ್ರಿ ಪ್ರಾರ್ಥಿಸಿದರು. ನಾಗರಡ್ಡಿ ಪಾಟೀಲ್ ಕರದಾಳ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ನಿರೂಪಿಸಿ, ವಂದಿಸಿದರು.

ಅಬ್ಬೆತುಮಕೂರು ವಿಶ್ವರಾಧ್ಯ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು

ಸೂರ್ಯ ತನ್ನ ನಿತ್ಯದ ಕಾರ್ಯ ಮುಗಿಸಿ ಅಸ್ತಂಗತನಾಗುವ ತವಕದಲ್ಲಿದ್ದ. ಇತ್ತ ಲಕ್ಷಾಂತರ ಭಕ್ತರ ದಂಡು ವಿಶ್ವರಾಧ್ಯರ ರಥೋತ್ಸವದ ಉತ್ಸಾಹದಲ್ಲಿದ್ದರು. ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಶನಿವಾರ ಮುಸ್ಸಂಜೆ 6.30ಕ್ಕೆ ರಥವನ್ನೇರಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಠದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ರಥವನವನ್ನೆಳೆದು ಸಂಭ್ರಮಿಸಿದರು.


ತೇರಿನ ಮೇಲೆ ಕಾರಿಕಾಯಿ, ಉತ್ತುತ್ತಿಗಳನ್ನು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಬೇಡಿದ್ದನ್ನು ನೀಡುವ ಭಗವಂತ ವಿಶ್ವರಾಧ್ಯನಲ್ಲಿ ತಮ್ಮ ಬಯಕೆ ಭಾವನೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ಶಿರಬಾಗಿ, ಕರ ಜೋಡಿಸಿ ನಮಿಸಿದರು. ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠದಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ರಥೋತ್ಸವ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು.


ಮೂಢತನ ದೂರ ಮಾಡುವ ಆರೂಢ: ನಾಡವರ ಮೂಢತನವನ್ನು ದೂರ ಮಾಡುವ ಆರೂಢರು ವಿಶ್ವರಾಧ್ಯರು. ಅಂತೆಯೆ ಜಾತ್ರೆಗೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಿಂದ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಯನ್ನು ಮೆರೆದರು.


ಶನಿವಾರ ಬೆಳಗ್ಗೆ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ಪುರಾಣ ಮಂಗಲ ಹಾಗೂ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆಯೊಂದಿಗೆ ಗ್ರಾಮದಲ್ಲಿ ನಡೆಯಿತು.


ಭಕ್ತಿಯ ಬೀಡು: ಹಲಗೆ, ಬಾಜಾ, ಭಜಂತ್ರಿ, ಡೊಳ್ಳು ಮುಂತಾದ ಮಂಗಲ ವಾದ್ಯಗಳ ಸದ್ದು, ನೆರೆದ ಭಕ್ತರ ಸಡಗರ, ಪುರವಂತರ ಸೇವೆ ಇವುಗಳಿಂದ ಅಬ್ಬೆತುಮಕೂರ ಭಕ್ತಿಯ ಬೀಡಾಗಿತ್ತು. ಬಿಳಿಜೋಳ, ಸಜ್ಜಿ ರೊಟ್ಟಿ, ಪುಂಡಿ ಪಲ್ಯ, ಶೇಂಗಾ ಹಿಂಡಿ, ಹಿಂಡಿ ಪಲ್ಯ, ಅನ್ನ ಸಾರಿನ ದಾಸೋಹ ನಿರಂತರವಾಗಿ ನಡೆದಿತ್ತು. ಫಳಾರ ಕೊಳ್ಳುವವರ ಭರಾಟೆಯೂ ವಿಪರೀತವಾಗಿತ್ತು. ಒಳ್ಳೆಯ ವ್ಯಾಪಾರವಾಗಿದ್ದರಿಂದ ಅಂಗಡಿಯವರು ಖುಷಿ ಖುಷಿಯಾಗಿದ್ದರು. ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದರು.


ಜನಪ್ರತಿನಿಧಿಗಳ ದಂಡು: ಈ ವೇಳೆ ಶಾಸಕ ಡಾ. ಮಾಲಕರಡ್ಡಿ, ಸಿದ್ದರಾಮ ಮೇತ್ರೆ, ಡಾ. ವೀರಬಸವಂತರಡ್ಡಿ ಮುದ್ನಾಳ, ನಾಗನಗೌಡ ಕಂದಕೂರ, ಚನ್ನಾರಡ್ಡಿ ಪಾಟೀಲ್ ತೂನ್ನೂರ್, ಲಿಂಗನಗೌಡ ಮಲ್ಹಾರ್, ಶ್ರೀನಿವಾಸ ರಡ್ಡಿ ಚನ್ನೂರ್, ವೆಂಕಟರಡ್ಡಿ ಮುದ್ನಾಳ, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾಳ, ಹಣಮಂತರಾವ ಹೆಂದೆ, ರವಿ ಬಾಪುರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದರು.